ಸುಕ್ಷೇತ್ರ ತವಗ ಮಠದ ಪೂಜ್ಯ ಹಿರಿಯ ಸ್ವಾಮಿಜಿಗಳು ಲಿಂಗೈಕ್ಯರಾದರು
ಬ್ರಹ್ಮಶ್ರೀ ಶ್ರೀ ಸಿದ್ದಲಿಂಗಯ್ಯ ತವಗಮಠ ಮಹಾಸ್ವಾಮಿಜಿಗಳು
ಗೋಕಾಕ ತಾಲೂಕಿನ ಸುಕ್ಷೇತ್ರ ತವಗ ಮಠದ ಪೂಜ್ಯ ಹಿರಿಯ ಸ್ವಾಮಿಜಿಗಳಾದ
ಸಿದ್ದಲಿಂಗಯ್ಯ ತವಗಮಠ ಮಹಾಸ್ವಾಮಿಜಿಗಳು
ಇವರು ಇಂದು ಸೋಮವಾರ, ದಿ. 02-03-2026 ರಂದು ಬೆಳಗಿನ ಜಾವ ಹೃದಯಾಘಾತದಿಂದ ಲಿಂಗೈಕ್ಯರಾಗಿರುವುದು ಅಪಾರ ದುಃಖದ ಸಂಗತಿ.
ಅವರ ಅಗಲಿಕೆಯಿಂದ
ಗೋಕಾಕ ತಾಲೂಕಿನ ಸುಕ್ಷೇತ್ರ ತವಗ ಮಠ ಹಾಗೂ ಭಕ್ತಸಮುದಾಯಕ್ಕೆ ಅಪಾರ ನಷ್ಟ ಉಂಟಾಗಿದೆ.
ಧಾರ್ಮಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಸೇವೆ ಸದಾ ಸ್ಮರಣೀಯ.
ಪರಮಾತ್ಮನು ಪೂಜ್ಯರ ಆತ್ಮಕ್ಕೆ ಶಾಂತಿ ನೀಡಲಿ.
ಕುಟುಂಬದ ಸದಸ್ಯರಿಗೆ, ಶ್ರೀಮಠದ ಭಕ್ತಾಧಿಗಳಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ.
ಓಂ ಶಾಂತಿ ಶಾಂತಿ ಶಾಂತಿ ![]()
ಸಂಯುಕ್ತ ದರ್ಶನ ನ್ಯೂಸ್
