

ಅಮಿತ ವಸಂತರಾವ್ ಜಾಧವ ಅವರ ಮಾಲೀಕತ್ವದ ಸ್ಪೈಸ್ ಗಾರ್ಡನ್ ಕೇಟರಿಂಗ್ ಸರ್ವಿಸ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಗೋಕಾಕ ನಗರದ ಯೋಗಿಕೊಳ್ಳ ರಸ್ತೆಯಲ್ಲಿರುವ ಅಮಿತ ವಸಂತರಾವ್ ಜಾಧವ ಅವರ ಮಾಲೀಕತ್ವದ ಸ್ಪೈಸ್ ಗಾರ್ಡನ್ ಕೇಟರಿಂಗ್ ಸರ್ವಿಸ್ ಇವರು ಡಿಸೆಂಬರ್ 2025ರ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಅತ್ಯುತ್ತಮ ಕ್ಯಾಟರಿಂಗ್ ಸೇವೆ ನೀಡಿರುವುದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸ್ಪೈಸ್ ಗಾರ್ಡನ್ ಸಂಸ್ಥೆಯು ಕಳೆದ 22 ವರ್ಷಗಳಿಂದ ಗೋಕಾಕ್ ಹಾಗೂ ಬೆಳಗಾವಿಗಳಲ್ಲಿ ಶಾಖಾಹಾರ ಹಾಗೂ ಮಾಂಸಾಹಾರದ ಹೊಟೇಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಕ್ಯಾಟರಿಂಗ್ ಸೇವೆಯಲ್ಲಿ ರುಚಿ, ಗುಣಮಟ್ಟ, ಶುಚಿತ್ವ, ಸಮಯಪಾಲನೆ ಹಾಗೂ ಸಿಬ್ಬಂದಿ ಸೇವೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ ಎಂದು ಪತ್ರ ಬರೆದಿದ್ದಾರೆ
ಬೆಳಗಾವಿಯಲ್ಲಿ ನಡೆದ 2025ನೇ ಸಾಲಿನ ಚಳಿಗಾಲದ ಅಧಿವೇಶನದ ಅವಧಿಯಲ್ಲಿ (ದಿನಾಂಕ: 08-12-2025 ರಿಂದ 19-12-2025 ರವರೆಗೆ) ಅತ್ಯಂತ ಶ್ಲಾಘನೀಯವಾಗಿ ಕಾರ್ಯನಿರ್ವಹಿಸಿದ್ದು, ಬೆಳಗಾವಿಯ ಸರ್ಕಾರಿ ನಿರೀಕ್ಷಣಾ ಮಂದಿರದಲ್ಲಿ ವಾಸ್ತವ್ಯವಿದ್ದ ಮುಖ್ಯಮಂತ್ರಿಯವರ ಕಾರ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಆಪ್ತ ವಲಯದವರಿಗೆ ಇವರು ಅಚ್ಚುಕಟ್ಟಾಗಿ ಆಹಾರ ಮತ್ತು ಕ್ಯಾಟರಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಅತಿಗಣ್ಯ ವ್ಯಕ್ತಿಗಳ ಉಪಸ್ಥಿತಿಯಿದ್ದರೂ ಸಹ ಯಾವುದೇ ದೂರುಗಳಿಗೆ ಆಸ್ಪದ ನೀಡದೇ ಸರ್ಕಾರದ ಉನ್ನತ ಮಟ್ಟದ ಜವಾಬ್ದಾರಿಯನ್ನು ಅರಿತು, ಅತ್ಯಂತ ಯಶಸ್ವಿಯಾಗಿ ಈ ಕಾರ್ಯವನ್ನು ಪೂರೈಸಿದ್ದಾರೆ.
ಶ್ರೀ ಅಮಿತ ವಸಂತರಾವ್ ಜಾಧವ ಅವರ ಈ ಕರ್ತವ್ಯ ನಿಷ್ಠೆ ಮತ್ತು ವೃತ್ತಿ ಪರತೆ ಸದಾ ಮುಂದುವರೆಯಲಿ ಎಂದು ಹಾರೈಸುತ್ತೇನೆ ಎಂದು ಪತ್ರ ಬರೆದಿದ್ದಾರೆ
Spice Garden
