ಲಕ್ಷ್ಮಿ ಹನುಮಂತ ಬದ್ರಿ ನೆಸರಗಿ ಸಹೋದರಿಯರ ಆದರ್ಶ
ಇವತ್ತು ಯಾದಗಿರಿ ಬೆಳಗಾವಿಯ ಕೆಂಪು ಬಸ್ಸಿನಲ್ಲಿ ಬರುವಾಗ ಜೀವನ ನಡೆಸಲು ಮದುವೆ,ಸಮಾರಂಭದಲ್ಲಿ ಅಡಿಗೆ ಬಡಿಸಿ ಜೀವನ ನಡೆಸುವ ಬಡಕುಟಂಬದ ಲಕ್ಷ್ಮಿ,ಬಸವ್ವ,ಭಾರತಿ, ಈ ಮೂರು ಯುವತಿಯರು,ಯಮನವ್ವ, ಗಂಗವ್ವ,ಎರಡು ತಾಯಿಂದಿರು ಪುಕ್ಕಟೆ ಬಸ್ ಪ್ರಯಾಣ ಬೇಡ, ಎಂದು ಟಿಕೇಟ ಪಡೆದು ನೇಸರಗಿಯಿಂದ ಬೆಳಗಾವಿ ವರೆಗೆ ಬಸ್ನಲ್ಲಿ ಪ್ರಯಾಣ ಮಾಡಿದರು,ನಾನು ಆ ಬಸ್ಸಿನಲ್ಲಿ ಇದ್ದೆ.
ಭಾರತಿಗೆ ತಂದೆ ಇಲ್ಲ,ತಾಯಿ ಕೆಲಸಕ್ಕೆ ಹೋಗಿ ಮನೆ ನಡೆಸಬೇಕು,ತಂಗಿ ಒಂದೂವರೆ ವರ್ಷ, ತಾಯಿಗೆ ಸಹಾಯ ಆಗಲಿ ಎಂದು ಶಾಲೆ ಬೀಟ್ಟು ಕೆಲಸಕ್ಕೆ ಹೋಗುತ್ತಾ ಇದ್ದಾಳೆ.
ಯಾಕೇ ಆಧಾರ ಕಾರ್ಡ ಇಲ್ಲವೇ?, ಅಂತ ಕೇಳಿದೆ.
ಆಗ ಅವರ ಭಾವನೆ ಕೇಳಿ ಒಂದು ಕ್ಷಣ ಆನಂದ ಬಾಷ್ಪದ ಅನುಭವ ಆಯಿತು.
ದೇಶ ಉಳಿಯಬೇಕು,.ಮೋದಿ ದೇಶ ಉಳಿಸಬೇಕು,ಹಾಗಾಗಿ ಪುಕ್ಕಟೆ ಏನೂ ಬೇಡ.ಇದನ್ನು ತಿಳಿಸಿ ಹೇಳಿದ ಬಸವ್ವ ವಯೊವ್ರದ್ದಳು ಅಂತ ಭಾವಿಸಿದೆ ,ಆದರೆ ಅವಳ ವಯಸ್ಸು 16ರಿಂದ18ಇರಬಹುದು..
ನನಗೆ ಅನಿಸಿದ್ದು ಇಂತಹ ದೇಶ ಭಕ್ತ ತಾಯಿಂದಿರು ಇರುವ ಕಾರಣವೇ, ವಿವೇಕಾನಂದ, ಬಸವಣ್ಣ, ಬಾಬಾ ಸಾಹೇಬ ಅಂಬೇಡ್ಕರ ಮುಂತಾದ ಸಾವಿರ ತ್ಯಾಗೀಗಳ ಜನ್ಮಭಾರತದಲ್ಲಿ ಆಗಿದೆ.,ಅಲ್ಲದೇ , ಲಕ್ಷ,ಲಕ್ಷ,ದೇಶ ಭಕ್ತರ ಬಲಿದಾನ ಆಗಿದೆ.
ಪ್ರತಿ ನಿತ್ಯ ದುಡಿದರೆ ಮಾತ್ರ ಆ ದಿವಸದ ಬದುಕು ಅಂತ ತಿಳಿದೂ ಸಹಿತ ದೇಶಕ್ಕಾಗಿ,ಮೋದಿಯವರ ನಡೆಗೆ ಗೌರವ ಕೊಟ್ಟು ಪ್ರತಿ ದಿವಸ ಟಿಕೇಟ ತೆಗೆದೆ ಪ್ರಯಾಣ ಮಾಡುವ ಆ ಗ್ರಾಮೀಣ ಮಾತೆಯರ ಆದರ್ಶ ನಮಗೆಲ್ಲ ಮಾದರಿ ಎಂದು ಬಸ್ಸಿನಲ್ಲಿ ಹೇಳಿದಾಗ ಕುಳಿತ ಪ್ರವಾಸಿಗರೆಲ್ಲ ದೀರ್ಘ ಚಪ್ಪಾಳೆ ಹೊಡೆದು, ಭಾರತ ಮಾತಾಕಿ ಜೈ,ವಂದೆ ಮಾತರಂ ಅಂತ ಹೇಳಿ ಅಭಿನಂದಿಸಿದ ರೀತಿ ನೋಡಿ ಸ್ವತ: ಕಂಡಕ್ಟರ ,ಡ್ರೆವರ ಸಹಿತ ಮೂಕವಿಸ್ಮಿತರಾದರು.
